Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

5000 ಕಿ.ಮೀ ದೂರ ತಲುಪಬಲ್ಲ ಅಗ್ನಿ-5 ಕ್ಷಿಪಣಿ ಯಶಸ್ವಿ ಪ್ರಯೋಗ

ಬಾಲಸೋರ್‌: ಅಣ್ವಸ್ತ್ರ ಹೊತ್ತೂಯ್ಯುವ ಸಾಮರ್ಥ್ಯದ ಅಗ್ನಿ-5 ಸರಣಿಯ 5ನೇ ಕ್ಷಿಪಣಿಯನ್ನು ಗುರುವಾರ ಯಶಸ್ವಿಯಾಗಿ ಒಡಿಶಾದ ಬಾಲಸೋರ್‌ನಲ್ಲಿ ಪ್ರಯೋಗಾರ್ಥ ಉಡಾವಣೆ ಮಾಡಲಾಗಿದೆ. ಇದು 5000 ಕಿ.ಮೀ ದೂರದ ಗುರಿಯನ್ನು ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಭಾರತದ ಶಸ್ತ್ರಾಗಾರಕ್ಕೆ ಇನ್ನಷ್ಟು ಬಲಬಂದಿದೆ.

19 ನಿಮಿಷಗಳಲ್ಲಿ 4900 ಕಿ.ಮೀ ವರೆಗೆ ಕ್ಷಿಪಣಿ ಸಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ. ಕ್ಯಾನಿಸ್ಟರ್‌ ಉಡಾಹಕದಿಂದ ಕ್ಷಿಪಣಿಯನ್ನು ಬೆಳಗ್ಗೆ 9.54ಕ್ಕೆ ಉಡಾಯಿಸಲಾಗಿತ್ತು.

ಅಗ್ನಿ ಸರಣಿಯಲ್ಲೇ ಇದು ಅತ್ಯಂತ ಸುಧಾರಿತ ಕ್ಷಿಪಣಿಯಾಗಿದ್ದು, ನ್ಯಾವಿಗೇಶನ್‌, ಸಿಡಿತಲೆ ಮತ್ತು ಇಂಜಿನ್‌ನಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ.

No Comments

Leave A Comment