Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಜ.16ರ೦ದು ಮಣಿಪಾಲ ಯುನಿವೆರ್ಸಲ್ಪ್ರೆಸ್ನಿಂದ “ಕೃತಿಜಗತ್ತು”ಪುಸ್ತಕಬಿಡುಗಡೆ

ಮಣಿಪಾಲಯುನಿವೆರ್ಸಲ್ಪ್ರೆಸ್(ಒUP) ತನ್ನ 119ನೇ ಪ್ರಕಾಶನವಾದ, ಪ್ರೊಫೆಸರ್ಟಿಪಿ ಅಶೋಕ ಅವರಿಂದರ ಚಿತವಾದ ಕೃತಿಜಗತ್ತು ಎಂಬ ಪುಸ್ತಕವನ್ನು ಬಿಡುಗಡೆಮಾಡುತ್ತಿದೆ. ಈಕಾರ್ಯಕ್ರಮವುನೂತನರವೀಂದ್ರಕಲಾಮಂಟಪ, ಒಉಒ ಕಾಲೇಜು, ಉಡುಪಿಯಲ್ಲಿ ದಿನಾಂಕ 16 ಜನವರಿ 2018ರಂದುಬೆಳಗ್ಗೆ 10 ಘಂಟೆಗೆನಡೆಯಲಿದೆ.

ಮಾಹೆಯಉಪಕುಲಪತಿಗಳಾದಡಾಹೆಚ್ವಿನೋದ್ಭಟ್ರವರಅಧ್ಯಕ್ಷತೆಯಲ್ಲಿನಡೆಯುವಈಸಮಾರಂಭದಲ್ಲಿಖ್ಯಾತಲೇಖಕಿಯಾದಶ್ರೀಮತಿವೈದೇಹಿಯವರುಈಪುಸ್ತಕವನ್ನುಲೋಕಾರ್ಪಣೆಮಾಡಲಿದ್ದಾರೆ.

ಇತ್ತೀಚಿಗೆಕೇಂದ್ರಸಾಹಿತ್ಯಅಕಾಡೆಮಿ-2017(ಕನ್ನಡ)ಪ್ರಶಸ್ತಿಯನ್ನುಗಳಿಸಿರುವಪುಸ್ತಕ“ಕಥನಭಾರತಿ”ಯಲೇಖಕರೂ ಆಗಿರುವಟಿಪಿ ಅಶೋಕರಿಗೆ ಸನ್ಮಾನಿಸುವ ಕಾರ್ಯವೂಇದೇಸುಸಂದರ್ಭದಲ್ಲಿನಡೆಯಲಿದೆ.ಸನ್ಮಾನಭಾಷಣವನ್ನುಖ್ಯಾತನಾಮರಾದಶ್ರೀಜಿರಾಜಶೇಖರ್ಹಾಗುಪ್ರೊ|| ನಾಗರಾಜ್ರಾವ್ಅ ವರು ಮಾಡಲಿದ್ದಾರೆ.

ಟಿಪಿಅಶೋಕರಈಕೃತಿಜಗತ್ತುಒUPಯಿಂದಪ್ರಕಾಶನಗೊಳ್ಳುತ್ತಿರುವ3ನೇಹೊತ್ತಿಗೆ. ಇದರಹಿಂದೆ, ಅನೇಕ ಭಾರತೀಯ ಭಾಷೆಗಳಲ್ಲಿನ ಆಧುನಿಕ ಬರಹಗಳ 20 ವಿಮರ್ಶಾತ್ಮಕ ಪ್ರಬಂಧಗಳ ರೂಪದಲ್ಲಿರುವ“ಕಥನಭಾರತಿ” ಎಂಬಪುಸ್ತಕಮತ್ತುವೈದೇಹಿಯವರಲೇಖನಗಳವಿಮರ್ಶಾತ್ಮಕಅಧ್ಯಯನವಾದ “ವೈದೇಹಿಕಥನ” ಎಂಬ ಎರಡು ಪುಸ್ತಕಗಳು ಬಿಡುಗಡೆಯಾಗಿವೆ.

ಪುಸ್ತಕದಬಗ್ಗೆ
ಪ್ರೊ|| ಟಿಪಿಅಶೋಕರಇತ್ತೀಚಿನರಚನೆಯಾಗುವಈ‘ಕೃತಿಜಗತ್ತು’ವಿವಿಧದೇಶ, ಭಾಷೆ, ಆಚಾರ, ಸಂಸ್ಕೃತಿಗಳಪರಿಚಯಿಸಿ, ವಿಶ್ಲೇಷಿಸಿ, ವಿಮರ್ಶಿಸಿ, ಅರ್ಥೈಸಿರುವಒಟ್ಟು 26 ಲೇಖನಗಳನ್ನು ಒಳಗೊಂಡಿದೆ. ಸಮಗ್ರ ವಿಶ್ವಸಾಹಿತ್ಯದ ಪರಿಚಯವೇ ಈ ಕೃತಿಯಿಂದ ಆಗುತ್ತದೆ ಎಂದರೆ ಅತಿಶಯವಲ್ಲ. ಒಂದೊಂದುಪ್ರಬಂಧವುಕೇವಲಸಾಮಾಜಿಕ, ಸಾಂಸ್ಕೃತಿಕ ಹಾಗು ರಾಜಕೀಯ ಘಟನೆಗಳ ಆಧಾರದ ಮೇಲಷ್ಟೇ ಅಲ್ಲ, ಹಿಂದಿನ 500 ವರ್ಷಗಳನೈತಿಕ, ಬೌದ್ಧಿಕಹಾಗುಧಾರ್ಮಿಕಆಗು-ಹೋಗುಗಳ ಮೇಲೆ ಜಗತ್ತಿನ ಉತ್ತಮ ಲೇಖಕರ ಪ್ರತಿಕ್ರಿಯೆಯನ್ನು ಅತಿ ಸುಂದರವಾಗಿ ಸಂಗ್ರಹಿಸಲಾಗಿದೆ. ಈ ಕೃತಿ ಜಗತ್ತು ನಮ್ಮ ಕನ್ನಡಸಾಹಿತ್ಯ ಜಗತ್ತಿನ ಜೊತಗಿನ ನಂಟನ್ನು ಅದ್ಭುತವಾಗಿ ನಿರೂಪಿಸಲಾಗಿದೆ ಎಂಬುದು ಇದರ ವೈಶಿಷ್ಟ್ಯ.

ಲೇಖಕರಬಗ್ಗೆ
ಟಿ ಪಿ ಅಶೋಕ ಅವರು ನಮ್ಮ ಕರ್ನಾಟಕ ಕಂಡ ಶ್ರೇಷ್ಠ ಸಾಹಿತಿ,ವಿಮರ್ಶಕ.ಸರಿಸುಮಾರು40ವರ್ಷಗಳಿಂದಸಾಹಿತ್ಯ, ಚಲನಚಿತ್ರ ಹಾಗು ರಂಗಭೂಮಿಯ ಬಗ್ಗೆ ಅಧ್ಯಾಪನವೃತ್ತಿ ನಡೆಸುತ್ತಿದ್ದಾರೆ. ಒಂದುಸ್ವಾಯತ್ತಸಂಸ್ಥೆಯಲ್ಲಿಪಾಠಮಾಡುವಕೆಲಸವಲ್ಲದೇ,ಸಾಹಿತ್ಯ, ಚಲನಚಿತ್ರಮತ್ತುರಂಗಭೂಮಿಯಮೇಲೆ350ಕ್ಕೂಅಧಿಕಲಘುಕಾರ್ಯಾಗಾರಗಳನ್ನುಕರ್ನಾಟಕದಾದ್ಯಂತಆಯೋಜಿಸಿಕಲಿಸಿದ್ದಾರೆ. ಇವರು ಸುಪ್ರಸಿದ್ಧ ಅಂಕಣಕಾರರು ಮತ್ತು ಅನುವಾದಕರೂಸಹ. ಇವರ ರಚನೆಯ 30ಕೃತಿಗಳಲ್ಲಿ 18ಕೃತಿಗಳು ವಿಮರ್ಶಾತ್ಮಕಗ್ರಂಥಗಳು, ಅನೇಕ ಪ್ರಬಂಧಗಳು ಮತ್ತು ನಮ್ಮಕನ್ನಡದ ಪ್ರಸಿದ್ಧಕವಿಗಳಾದಕುವೆಂಪು,ಮಾಸ್ತಿವೆಂಕಟೇಶಐಯಂಗಾರ್,ಶಿವರಾಮಕಾರಂತ,ತೇಜಸ್ವಿ, ವೈದೇಹಿ ಇತ್ಯಾದಿ ಮಹನೀಯರ ಬಗೆಗಿನ ಸುದೀರ್ಘ ಅಧ್ಯಯನ ಕುರಿತಕೃತಿಗಳು ಒಳಗೊಂಡಿವೆ.ಇವರಿಗೆ ಸಂದಪ್ರತಿಷ್ಠಿತ ಗೌರವಗಳ, ಪ್ರಶಸ್ತಿಗಳ ಪಟ್ಟಿ ತುಂಬಾದೊಡ್ಡದಿದೆ . ಕರ್ನಾಟಕಸಾಹಿತ್ಯಅಕಾಡೆಮಿ,ಕನ್ನಡ ಸಾಹಿತ್ಯಪರಿಷತ್ತು , ಮೈಸೂರು ವಿಶ್ವವಿದ್ಯಾಲಯ, ಗೋವಿಂದಪೈ ಸ್ಮಾರಕ ಸಂಶೋಧನಾಕೇಂದ್ರ, ಆರ್ಯಭಟಸಂದೇಶ ಮತ್ತು ಮಾಸ್ತಿಪ್ರತಿಷ್ಠಾನ, ಇಂತಹ ಗೌರವಾನ್ವಿತ ಸಂಸ್ಥೆಗಳಿಂದಸಮ್ಮಾನಿತರಾಗಿದ್ದಾರೆ. ಭಾರತೀಯಜ್ಞಾನಪೀಠ,ಬಿರ್ಲಾಫೌಂಡೇಷನ್, ಕೇಂದ್ರಸಾಹಿತ್ಯ ಅಕಾಡೆಮಿ ಹಾಗು ನ್ಯಾಷನಲ್ಬುಕ್ಟ್ರಸ್ಟ್ಆಫ್ಇಂಡಿಯಾ, ಇಂತಹಪ್ರತಿಷ್ಠಿತಸಂಸ್ಥೆಗಳಭಾಷಾಸಲಹಾಸಮಿತಿಯಸದಸ್ಯರಾಗಿಕಾರ್ಯನಿರ್ವಹಿಸಿದ್ದಾರೆ. “ಕಥನಭಾರತಿ” ಎಂಬ ವಿಮರ್ಶಾತ್ಮಕ ಕೃತಿಗೆ 2017ರಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ(ಕನ್ನಡ) ಪ್ರಶಸ್ತಿಗೆಭಾಜನರಾಗಿದ್ದಾರೆ.

No Comments

Leave A Comment