Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಜ. 18: ಪಲಿಮಾರು ಶ್ರೀ ಸರ್ವಜ್ಞ ಪೀಠಾರೋಹಣ-ಸಕಲ ಸಿದ್ದತೆಯಿ೦ದ ಕ೦ಗೊಳಿಸುತ್ತಿರುವ ಶ್ರೀಕೃಷ್ಣನ ನಾಡಾದ “ಉಡುಪಿ”

ಉಡುಪಿ: ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ದ್ವಿತೀಯ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಜ. 18ರಂದು ಪ್ರಾತಃಕಾಲ 3 ಗಂಟೆಗೆ ವೈಭವದ ಪರ್ಯಾಯ ಮೆರವಣಿಗೆ, 6.35ಕ್ಕೆ ಶ್ರೀಗಳ ಸರ್ವಜ್ಞ ಪೀಠಾರೋಹಣ ನೆರವೇರಲಿದೆ.ಇದಕ್ಕಾಗಿ ಸಕಲ ಸಿದ್ದತೆಯು ಪೂರ್ಣಗೊ೦ಡಿದೆ.

ಜೋಡುಕಟ್ಟೆಯಿ೦ದ ರಥಬೀದಿಯ ಸುತ್ತಲೂ ವಿದ್ಯುತ್ ದೀಪಾಲ೦ಕಾರ ಹಾಗೂ ಸ್ವಾಗತ ಕಾಮನುಗಳನ್ನು ಹಾಕುವ ಕಾರ್ಯ ಪೂರ್ಣಗೊ೦ಡಿದೆ. ಪರ್ಯಾಯ ಪೀಠಾರೋಹಣವನ್ನು ಗೈಯಲಿವ ಶ್ರೀಪಲಿಮಾರು ಮಠವನ್ನು ಸಹ ವಿದ್ಯುತ್ ದೀಪಾಲ೦ಕಾರದಿ೦ದ ಶೃ೦ಗರಿಸಲಾಗಿದೆ.ಭಕ್ತ ಜನಸಾಗರವೇ ಈ ಪರ್ಯಾಯ ಮಹೋತ್ಸವವನ್ನು ವೀಕ್ಷಿಸಲು ಉಡುಪಿಯತ್ತ ಬರುತ್ತಿದ್ದಾರೆ. ವಿವಿಧ ಕಡೆಗಳಿ೦ದ ಹಸಿರುಹೊರೆಕಾಣಿಕೆಯು ಸಹ ಮಠಕ್ಕೆ ಬರುತ್ತಿವೆ.

15ಕ್ಕೂ ಅಧಿಕ ಸ್ತಬ್ಧಚಿತ್ರಗಳು, 60ಕ್ಕೂ ಹೆಚ್ಚು ವೈವಿಧ್ಯಮಯ ಜಾನಪದ ಕಲಾ ತಂಡಗಳು, ಸಂಕೀರ್ತನೆ, ಭಜನ ತಂಡಗಳೊಂದಿಗೆ ವೈಭವದ ಮೆರವಣಿಗೆ ಜೋಡುಕಟ್ಟೆಯಿಂದ ರಥಬೀದಿಗೆ ಸಾಗಿಬರಲಿದೆ. ಅನಂತರ ಮುಂಜಾನೆ 6.35ಕ್ಕೆ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಸರ್ವಜ್ಞ ಪೀಠಾರೋಹಣಗೈಯಲಿದ್ದಾರೆ. ಬಳಿಕ ರಾಜಾಂಗಣದಲ್ಲಿ ವೈಭವದ ಪರ್ಯಾಯ ದರ್ಬಾರ್‌ ಜರಗಲಿದೆ.

ದರ್ಬಾರ್‌ ಸಮ್ಮಾನಿತರು
ಪರ್ಯಾಯ ದರ್ಬಾರ್‌ನಲ್ಲಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪೇಜಾವರ ಶ್ರೀಪಾದರು ಮತ್ತು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಅಭಿನಂದಿಸಲಿದ್ದಾರೆ. ಕೆ. ವಾಸುದೇವ ಆಸ್ರಣ್ಣ, ಡಾ| ಮೋಹನ ಆಳ್ವ, ನೇರಂಬಳ್ಳಿ ರಾಘವೇಂದ್ರ ರಾವ್‌, ಮಯೂರ ಶ್ರೀನಿವಾಸ ರಾವ್‌, ಕೆ. ನಾಗರಾಜ ಪುರಾಣಿಕ, ಅಡ್ಕ ರಾಘವೇಂದ್ರ ರಾವ್‌, ಡಾ| ರಾಜೇಂದ್ರ ಸಿಂಗ್‌, ಮಧುಪಂಡಿತ್‌ ದಾಸ್‌, ಕಿಶೋರ್‌ ಆಳ್ವ, ಕೆ. ರಾಮಪ್ರಸಾದ್‌ ಭಟ್‌ ಚೆನ್ನೈ, ಅಪ್ಪಣ್ಣ ಹೆಗ್ಡೆ, ಗೋಪಾಲ್‌ ಮೊಗೆರಾಯ, ಬಿ.ಆರ್‌. ಶೆಟ್ಟಿ ಅವರನ್ನು ದರ್ಬಾರ್‌ನಲ್ಲಿ ಸಮ್ಮಾನಿಸಲಾಗುವುದು.

ಲಕ್ಷ ತುಳಸಿ ಅರ್ಚನೆ….
ದರ್ಬಾರ್‌ ಅನಂತರ ಪಲಿಮಾರು ಶ್ರೀಗಳು ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆಯೊಂದಿಗೆ ಮಹಾಪೂಜೆ ನೆರವೇರಿಸಲಿದ್ದಾರೆ. ಅದೇ ದಿನ ಬೆಳಗ್ಗೆ ಶ್ರೀಪಾದರ ಸಂಕಲ್ಪದಂತೆ 2 ವರ್ಷಗಳ ಅಖಂಡ ಭಜನೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮಹಾಪೂಜೆಯ ಅನಂತರ ಸಾರ್ವ ಜನಿಕ ಮಹಾ ಅನ್ನಸಂತರ್ಪಣೆ ಜರಗಲಿದೆ. ಸಂಜೆ ಪರ್ಯಾಯದ ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟನೆ ಗೊಂಡು ಜ. 29ರ ವರೆಗೆ ಪ್ರತೀ ದಿನ ಸಂಜೆ 7 ಗಂಟೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.

ರಥಬೀದಿಯ ಶ್ರೀ ಪರಾವಿದ್ಯಾ ಮಂಟಪದಲ್ಲಿ ಪಲಿಮಾರು ಮಠದ ಪರ್ಯಾಯೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಡುಪಿ ಹೆಜ್ಜೆಗೆಜ್ಜೆಯ ವಿದುಷಿ ಯಶ ರಾಮಕೃಷ್ಣ ಮತ್ತು ಬಳಗದವರಿಂದ ನೃತ್ಯ ಸೇಚನ ಕಾರ್ಯಕ್ರಮ .

No Comments

Leave A Comment