Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಇಸ್ರೇಲ್‌ ಪ್ರಧಾನಿಗೆ ಅಪ್ಪುಗೆಯ ಸ್ವಾಗತ ಕೋರಿದ ಪ್ರಧಾನಿ ಮೋದಿ

ಹೊಸದಿಲ್ಲಿ:  6 ದಿನಗಳ ಭಾರತ ಪ್ರವಾಸಕ್ಕಾಗಿ ಆಗಮಿಸಿರುವ ಇಸ್ರೇಲ್‌ ಪ್ರಧಾನಿ ಬೆಂಝಮಿನ್‌ ನೆತನ್ಯಾಹು ಅವರನ್ನು ಭಾನುವಾರ  ಪ್ರಧಾನಿ ನರೇಂದ್ರ ಮೋದಿ ಅವರು ಶಿಷ್ಟಾಚಾರಗಳನ್ನು ಬದಿಗೊತ್ತಿ ವಿಮಾನ ನಿಲ್ದಾಣಕ್ಕೆ ತೆರಳಿ ಆತ್ಮೀಯವಾಗಿ ಸ್ವಾಗತಿಸಿದರು.

130 ಮಂದಿಯ ಅಧಿಕಾರಿಗಳ ನಿಯೋಗ ಮತ್ತು ಪತ್ನಿಯೊಂದಿಗೆ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ  ನೆತನ್ಯಾಹು ಅವರನ್ನು ಪ್ರಧಾನಿ  ಮೋದಿ ಆತ್ಮೀಯವಾಗಿ ಅಪ್ಪುಗೆ ನೀಡಿ  , ಹಸ್ತಲಾಘವ ಮಾಡುವ ಮೂಲಕ ಸ್ವಾಗತಿಸಿದರು.

ಬೆಂಝಮಿನ್‌ ಮತ್ತು ಮೋದಿ ಅವರು ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರದ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಬುಧವಾರ ಗುಜರಾತ್‌ಗೆ ತೆರಳಲಿರುವ ನೆತನ್ಯಾಹು  ಮೋದಿ ಅವರೊಂದಿಗೆ ಸಾರ್ವಜನಿಕ ರೋಡ್‌ ಶೋ ನಡೆಸಲಿದ್ದಾರೆ.

ಮೋದಿ ಮತ್ತು ನೆತನ್ಯಾಹು ದೆಹಲಿಯಲ್ಲಿರುವ 1ನೇ ವಿಶ್ವ ಯುದ್ಧ ಹುತಾತ್ಮರ ಸ್ಮಾರಕ ತೀನ್‌ ಮೂರ್ತಿ ಗೆ ತೆರಳಿ ನಮನ ಸಲ್ಲಿದರು.

ನೆತನ್ಯಾಹು ಅವರು ಶುಕ್ರವಾರ ಮುಂಬಯಿಯಲ್ಲಿ ಬಾಲಿವುಡ್‌ನ‌ ಗಣ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ.

No Comments

Leave A Comment