Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಹಾಸನ: ಮನೆ ಮುಂದೆ ನಿಂತಿದ್ದ ಬಾಲಕನ ಹೊತ್ತೊಯ್ದ ಒಂಟಿ ಸಲಗ, ಮೃತನ ಶವ ಪತ್ತೆ

ಹಾಸನ: ಮನೆ ಮುಂದೆ ನಿಂತಿದ್ದ ಪುಟ್ಟ ಬಾಲಕನನ್ನು ಒಂಟಿ ಸಲಗವೊಂದು ಹೊತ್ತೊಯ್ದು ಕೊಂದು ಹಾಕಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ.

ಮೃತ ಬಾಲಕನನ್ನು 14 ವರ್ಷದ ಭರತ್ ಎಂದು ಗುರುತಿಸಲಾಗಿದ್ದು, ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕೊಡಗವತ್ತವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭರತ್ ತಂದೆ ಇಲ್ಲದ ತಬ್ಬಲಿಯಾಗಿದ್ದು, ಆತನ ತಾಯಿ ಇತ್ತೀಚೆಗಷ್ಟೇ  ಸಂಕ್ರಾಂತಿ ಹಬ್ಬದ ನಿಮಿತ್ತ ಭರತ್ ಅಜ್ಜಿ ಜಯಮ್ಮನ ಮನೆಗೆ ಬಂದಿದ್ದರಂತೆ.

ಇಂದು ಮನೆ ಮುಂದೆ ಆಟವಾಡುತ್ತಾ ನಿಂತಿದ್ದ ಬಾಲಕ ಭರತ್ ನನ್ನು ಒಂಟಿಸಲಗ ಹೊತ್ತೊಯ್ದಿದೆ. ಮನೆ ಮುಂದೆ ಆಡುತ್ತಿದ್ದ ಬಾಲಕ ಕಾಣದೇ ಇದ್ದುದರಿಂದ ಆತಂಕಕ್ಕೀಡಾದ ತಾಯಿ ಮತ್ತು ಅಜ್ಜಿ ಜಯಮ್ಮ ಬಾಲಕನಿಗಾಗಿ  ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮೃತ ಭರತ್ ನ ಮೃತದೇಹ ಪತ್ತೆಯಾಗಿದೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿರುವ ಸ್ಥಳೀಯ ಪೊಲೀಸರು ಹಾಗೂ ಅರಣ್ಯಇಲಾಖೆ ಸಿಬ್ಬಂದಿ ಆನೆಗಾಗಿ ಕಾರ್ಯಾಚರಣೆ ರೂಪಿಸಿದ್ದಾರೆ.  ಪ್ರಸ್ತುತ ಮೃತ ಬಾಲಕ ಭರತ್ ನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

No Comments

Leave A Comment