Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಭೀಕರ ಅಪಘಾತ:ಹಿರಿಯ ಪತ್ರಕರ್ತ ಡಾ.ವಿರೇಶ ಹಿರೇಮಠ ದುರ್ಮರಣ

ಬೆಳಗಾವಿ: ಜಿಲ್ಲೆಯ ನಂದಗಡ ಬಳಿ ಶನಿವಾರ ತಡರಾತ್ರಿ ಕಾರು  ಮರಕ್ಕೆ ಗುದ್ದಿ ಸಂಭವಿಸಿದ ಭೀಕರ ಅವಘಡದಲ್ಲಿ  ಹಿರಿಯ ಪತ್ರಕರ್ತ ಡಾ ವಿರೇಶ ಹಿರೇಮಠ ಅವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ದುರ್ಘ‌ಟನೆಯ ವೇಳೆ ಕಾರಿನಲ್ಲಿದ್ದ ಪತ್ನಿ ಗೌರಿ  ಮತ್ತು ಕಾರು ಚಾಲಕ ಸುನೀಲ್  ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋವಾ ಪ್ರವಾಸ ಮುಗಿಸಿ ಕುಟುಂಬದೊಂದಿಗೆ ಬಾಗಕೋಟೆಗೆ ಹಿಂದಿರುಗುವಾಗ ಘಟನೆ  ನಡೆದಿದೆ.

 ವಿರೇಶ ಹಿರೇಮಠ ಸದ್ಯ ಬಾಗಲಕೋಟೆ ಬಿವಿವಿ  ಕಾಲೇಜಿನಲ್ಲಿ ಪತ್ರಿಕೊಧ್ಯಮ  ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದರು.

ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಮೃತ ದೇಹ ಇರಿಸಲಾಗಿದೆ.

No Comments

Leave A Comment