Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಕಲಬುರಗಿ:ಸಿಕ್ಕ ಸಿಕ್ಕ ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಕಲಬುರಗಿ: ನಗರದ ವಿವಿಧ ಬಡಾವಣೆಗಳಲ್ಲಿ ಶನಿವಾರ ತಡರಾತ್ರಿ ಸಿಕ್ಕ ಸಿಕ್ಕಕಡೆ ದುಷ್ಕರ್ಮಿಗಳು ಕಾರುಗಳಿಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಕಾರು ವಾಹನಗಳ ಮಾಲಕರು ಇದೀಗ ಭೀತಿಯಿಂದ ಕಾಲ ಕಳೆಯುವಂತಾಗಿದೆ.

ಸೇಡಂ ರಸ್ತೆಯ ಜಯನಗರದಲ್ಲಿ  2 ಕಾರು. ಬನಶಂಕರಿ ಬಡಾವಣೆ ಬಳಿ 1 ಕಾರಿಗೆ , ವಿಶ್ವೇಶರಯ್ಯ ಬಡಾವಣೆಯಲ್ಲಿ ಬಳಿ 1, ಯುನೈಟೆಡ್ ಆಸ್ಪತ್ರೆ ಬಳಿ 1, ಲಾಲಗೇರಿ ಕ್ರಾಸ್ ಬಳಿ 1 ಕಾರು ಸೇರಿದಂತೆ ಎಂಟಕ್ಕೂ ಹೆಚ್ಚು  ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ.

ದುಷ್ಕರ್ಮಿಗಳ ಕೃತ್ಯ ಮನೆಗಳ ಮುಂದೆ ಅಳವಡಿಸಲಾಗಿದ್ದು  ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳಗಳಿಗೆ ತೆರಳಿ  ಪೊಲೀಸರು ಪರಿಶೀಲನೆ ನಡೆಸಿದ್ದು ಆರೋಪಿಗಳಿಗಾಗಿ  ಶೋಧ ನಡೆಸುತ್ತಿದ್ದಾರೆ.

No Comments

Leave A Comment